Showing posts with label life. Show all posts
Showing posts with label life. Show all posts

Wednesday, November 4, 2020

Positive thinking (ಸಕಾರಾತ್ಮಕ ಚಿಂತನೆ )

 ಈ ಜೀವ,  ಜೀವನ ಎಲ್ಲವೂ ದೇವರ ಕೃಪೆ ಯಿಂದಲೇ ಲಭ್ಯವಾಗಿವೆ. ನಮಗೆ ದೊರೆತಿರುವ ಅತ್ಯಮೂಲ್ಯವಾದ ಒಂದು ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

  ಮನುಷ್ಯನಿಗೆ ಆತ ಕಟ್ಟುವ ಒಂದು ಸುಂದರ ಕನಸಿನ ಲೋಕ ಮತ್ತು ಅವನ ಆಲೋಚನೆಗಳು ನೀಡುವ ಸುಖ-ಸಂತೋಷವನ್ನು ಬೇರೆ ಯಾವುದರಿಂದಲೂ ಪಡೆಯುವುದು ಕಷ್ಟ ಸಾಧ್ಯ.

 ಸಕಾರಾತ್ಮಕ ಮತ್ತು ನಕಾರಾತ್ಮಕ ಚಿಂತನೆಗಳ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.  ಜೀವನದ ಪ್ರತಿಯೊಂದು ವಿಷಯದಲ್ಲಿ ಹೃದಯದಲ್ಲಿ ಈ ಎರಡು ಮುಖಗಳು ಇದ್ದೇ ಇರುತ್ತವೆ. ಆದರೆ ಆಯ್ಕೆ ಮಾತ್ರ ನಮ್ಮದಾಗಿರುತ್ತದೆ.  ಯಾರು ತಮ್ಮ ಜೀವನವು ಎಂದಿಗೂ ಸಂತೋಷ,  ಸುಖಕರವಾಗಿರಲಿ ಎಂದು ಬಯಸುವರು ಅವರು ಸಕಾರಾತ್ಮಕ ಚಿಂತನೆಯನ್ನು ಆರಿಸಿಕೊಂಡು, ತಮ್ಮ ಬದುಕನ್ನು ಸುಂದರವಾಗಿ ಸುತ್ತಾರೆ ಮತ್ತು ಜೀವನದಲ್ಲಿ ಶ್ರೇಷ್ಠತೆಯನ್ನು,ಉನ್ನತ ಶಿಖರವನ್ನು ಏರುವಲ್ಲಿ ಯಶಸ್ವಿಯಾಗುತ್ತಾರೆ.

 ಗುರಿ ಮತ್ತು ಗೆಲುವಿನ ನಡುವೆ ಹತ್ತಾರು ಮೆಟ್ಟಿಲು ಹತ್ತಿ ನಡೆಯುವುದು ಅನಿವಾರ್ಯ.  ನಮ್ಮ ಗುರಿಯನ್ನು ಗೆಲುವನ್ನಾಗಿ ಸುವಲ್ಲಿ ನಾವು ಸೋಲುತಿರುವೆವು ಎಂದೆನಿಸಿದರೆ ಆಗಲೇ ಅರಿತುಕೊಂಡು ಬಿಡಿ, ಮನುಷ್ಯನ ಹಿತ ಶತ್ರುಗಳಾದ ಕೋಪ,  ಆಲಸ್ಯ,  ನಕಾರಾತ್ಮಕ ಚಿಂತನೆ, lack of confidence etc. ಇವೆಲ್ಲವೂ ಅವನ ಜೀವನವನ್ನು ಸಂಪೂರ್ಣವಾಗಿ ಆವರಿಸಿಕೊಂಡಿವೆ ಎಂದು. ಈ ಶತ್ರುಗಳನ್ನು ದೂರ ಮಾಡಲು ಮನುಷ್ಯ' ಸಹನೆ' ಎಂಬ ಮಿತ್ರನ ಮೊರೆಹೋಗಬೇಕು.

 ಮನುಷ್ಯನಿಗೆ ಸಹನೆ ಇರಬೇಕು,  ಆಗಲೇ ಅವನು ತನ್ನ ಗುರಿಯನ್ನು ಗೆಲುವನ್ನಾಗಿಸುವಲ್ಲಿ ಯಶಸ್ವಿಯಾಗಬಲ್ಲ ಹಾಗೂ  ಅವನು   ತನ್ನನ್ನು  ತಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲ.

 ಮನುಷ್ಯ ಮಾಡುವ ಸಕಾರಾತ್ಮಕ ಚಿಂತನೆಗಳಿಂದ ಆತನ ಅಂತರಂಗ ಯಾವಾಗಲೂ ಸಂತೋಷದಿಂದ ಇರಲು ಸಹಕಾರಿಯಾಗುತ್ತದೆ.  ಅಂತರಂಗದ ಕೃಷಿ ಮನುಷ್ಯನ ಮುಖದಲ್ಲಿ ಒಂದು ಸುಂದರ ಕಾಂತಿಯ ರೂಪದಲ್ಲಿ ಪ್ರತಿಫಲಿಸುತ್ತದೆ.  ಈ ಕಾಂತಿ ಅವನನ್ನು ಮಾತ್ರವಲ್ಲದೆ ಸುತ್ತಲಿರುವ ಜನರಲ್ಲೂ ಸಹ ಸಂತಸವನ್ನು ಸೃಷ್ಟಿಸುತ್ತದೆ.

ಮನಸ್ಸು ಎಂದಿಗೂ ಸಹ ಚಂಚಲ.  ಆದರೆ ಮೆದುಳು ಬುದ್ಧಿವಂತೆ. ಆದ್ದರಿಂದ ಚಂಚಲತೆಗೆ ಒಳಗಾಗದೆ ಮೆದುಳಿನಂತೆ ಬುದ್ಧಿವಂತಿಕೆಯ ಸಕಾರಾತ್ಮಕ ಚಿಂತನೆಯನ್ನು ಮಾಡಬೇಕು.  ಆಗ ಮಾತ್ರ ನಮ್ಮ ಜೀವನ ಸಮತೋಲನವಾಗಿ ಇರಲು ಸಾಧ್ಯ.

 ನಕಾರಾತ್ಮಕ ಚಿಂತನೆಗಳನ್ನು ಸಕಾರಾತ್ಮಕವಾಗಿ ಸಿ ಕೊಳ್ಳುವಲ್ಲಿ ಮನಸ್ಸು  ಅತಿಮುಖ್ಯ ಪಾತ್ರವನ್ನು ನಿಭಾಯಿಸುತ್ತದೆ.

 ಕಾರ್ಯಸಿದ್ಧಿಗೆ ನಾವು ಮನಸ್ಸು ಮಾಡಲೇಬೇಕು. (Focus)

ಆಗಲೇ ಅಸಾಧ್ಯ ಗಳು ಸಹ ಸಾಧ್ಯವಾಗುತ್ತದೆ.' ಮನಸ್ಸಿದ್ದರೆ ಮಾರ್ಗ'.

 ಮನುಷ್ಯನಿಗೆ ಜವಾಬ್ದಾರಿ ನಿಭಾಯಿಸುವುದು ಆರಂಭದಲ್ಲಿ ಕಷ್ಟ  ಎಂದೆನಿಸುವುದು ಸಹಜ.  ಆದರೆ ಪೂರೈಸಿದ ನಂತರ ಸಿಗುವ ಆನಂದ,  ಸಂತೃಪ್ತಿ ಅವನ ಎಲ್ಲಾ ಕಷ್ಟಗಳನ್ನು ಮರೆಸಿಬಿಡುತ್ತದೆ.

 Always keep hoping, something good is waiting for us. ಇದು ಸಹ ಸಕಾರತ್ಮಕ ಚಿಂತನೆಯ ಒಂದು ಭಾಗ. ಯಾವಾಗ ನಾವು ಸಕಾರಾತ್ಮಕ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆಯೋ ಆಗ ಜೀವನದಲ್ಲಿ ಎಂತಹ ಕಷ್ಟ ಬಂದರೂ ಸಹ ನಮ್ಮ ಅಂತರಂಗ ಸಂತೋಷದಿಂದ ದೂರ ಆಗಲಾರದು.  ಆ ನಮ್ಮ ತುಟಿಗಳಮೇಲೆ ನ ಕಿರುನಗೆ ಅಳಿಸಿ ಹೋಗದು.

 ನಿಮ್ಮನ್ನು ನಿಷ್ಕಲ್ಮಶವಾಗಿ ಪ್ರೀತಿ ಮಾಡಿದ ವ್ಯಕ್ತಿಗಳಿಗೆ ನಿಮ್ಮ ಪ್ರೀತಿ ತುಂಬಿ ಕೊಡಿ.  ಪ್ರೀತಿಯೆನ್ನುವುದು ಮಾನಸಿಕ ಭಾವನೆಗಳ ತಾಣ.  ಮನಸ್ಸಿನ ಪ್ರೀತಿ ಹಂಚಿಕೆ ಮಾಡಿದಷ್ಟು ಹೆಚ್ಚು ಹೆಚ್ಚು ಉದ್ಭವವಾಗುತ್ತದೆ. ತನ್ನ ಸುಖ ಸಮಾಜದ ಸುತ್ತಲಿರುವ ಜನರ ನೆಮ್ಮದಿಯಲ್ಲಿ ಅಡಗಿದೆ ಎಂದು ಅರಿತವನ ಬದುಕು ಎಂದಿಗೂ ಶ್ರೇಷ್ಠತೆಯನ್ನು ಕಾಣುತ್ತದೆ.

 ಮನುಷ್ಯ ಬೇರೆ ಜನರು ಸುಖವಾಗಿರಲಿ ಎಂಬ ಭಾವನೆ ಬಳಸಿಕೊಂಡರೆ ಸಾಕು, ಆಗ ಅವನಿಗೆ ಕೆಟ್ಟ ವಿಷಯಗಳು ಕಾಣಿಸುವುದೇ ಇಲ್ಲ.  ಜೀವನ ಎಂಬುದು ಸಕಾರಾತ್ಮಕ ಚಿಂತನೆಗಳು ಸಂಗಮ,  ಬಂದಿದ್ದನ್ನು ಎದುರಿಸುವ ಮನೋಧೈರ್ಯ ಸಕಾರಾತ್ಮಕತೆ ಯಿಂದ ಉತ್ಪತ್ತಿಯಾಗುತ್ತದೆ. ನಾವೆಲ್ಲರೂ ಎಂದಿಗೂ ನಮ್ಮ ಜೀವನದಲ್ಲಿ ಸಕಾರಾತ್ಮಕ ತೆಯನ್ನು ಸ್ಥಿರವಾಗಿರಿಸಿಕೊಳ್ಳೋಣ.

" ಸರ್ವೇಜನ:

 ಸುಖಿನೋಭವಂತು"

                       






चरक निदानस्थान quetions

                  निदानस्थान       click to dowload   1) Explain the sadhyaasadhyata of Prameha.     ( 5 marks )   ...